ದೇವರ ವಿರುದ್ಧ ಸರ್ಕಾರದ ನಡೆಗಳು . " ಕೊರೋನಾ ಬಿಕ್ಕಟ್ಟು ದೇವರ ಆಟ " ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವರು, ಭಾರತ ಸರ್ಕಾರ. ಹೌದು, ಇದು ಅಕ್ಷರಶಃ ಸತ್ಯ.ಈ ಜಗತ್ತೇ ದೇವರ ಸೃಷ್ಟಿ ಎಂದು ನಂಬಿರುವಾಗ, ಎಲ್ಲವೂ ಅಲ್ಲಾ ಜೀಸಸ್ ರಾಮನ ಕೃಪೆಯಿಂದ ನಡೆಯುತ್ತಿದೆ ಎಂದು ಭಾವಿಸಿರುವಾಗ, ಅಸಂಖ್ಯಾತ ಮಂದಿರ ಮಸೀದಿ ಚರ್ಚುಗಳೇ ನಮ್ಮ ಸಮಸ್ಯೆಗಳ ಪರಿಹಾರ ಕೇಂದ್ರವಾಗಿರುವಾಗ ಇದು ದೇವರ ಆಟವಲ್ಲದೇ ಮತ್ತೇನು. ಲಾಕ್ ಡೌನ್ ಸಮಯದಲ್ಲಿ ಆ ಬಡ ಕೂಲಿ ಕಾರ್ಮಿಕರು ಹಸಿವು , ವಲಸೆ ಕಾರಣದಿಂದ ಪಡಬಾರದ ಕಷ್ಟ ಪಟ್ಟು ಕೆಲವರು ಸತ್ತು ಹೋಗಿರುವುದು ದೇವರ ಆಟವೇ. ಆಸ್ಪತ್ರೆಗೆ ಸೇರಿಸಲಾಗದೆ, ವೆಂಟಿಲೇಟರ್ ಸೌಲಭ್ಯ ಸಿಗದೆ, ಆಂಬುಲೆನ್ಸ್ ನಲ್ಲಿ ನರಳಿ ನರಳಿ ಪ್ರಾಣ ಬಿಟ್ಟ ಘಟನೆಗಳಿಗು ದೇವರ ಆಟವೇ ಕಾರಣ. ಆರ್ಥಿಕ ಕುಸಿತದಿಂದ ದೇಶದ ಶೇಕಡಾ 50% ಜನರು ಸಹಜ ಊಟದಿಂದ ವಂಚಿತರಾಗುವುದಕ್ಕೂ ದೇವರ ಆಟವೇ ಕಾರಣ. ಆದರೆ, ಮಾನ್ಯ ಸಚಿವೆ ಮತ್ತು ಅವರ ಬಾಸ್ ಪ್ರಧಾನ ಮಂತ್ರಿಗಳು ಮಾತ್ರ ದೇವರ ಆಟಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ರಿರುವುದು ಅಕ್ಷಮ್ಯ ಅಪರಾಧ ಮತ್ತು ಇದನ್ನು ಖಂಡಿಸಲೇಬೇಕು. ಎಂಬ ವಿಷಯದ ಕುರಿತು ಬೆಳಕು ಚೆಲ್ಲಲು ಇಗೋ ಯುವ ಚೈತನ್ಯಶೀಲ ಬರಹಗಾರ ವಿವೇಕಾನಂದ ಹೆಚ್. ಕೆ. ಅವರು ಬದಲಾವಣೆ ದಿನಪತ್ರಿಕೆಗೆ ಬರೆಯುತ್ತಿರುವ ವಿವೇಕ ಜಾಗೃತಿ ಅಂಕಣದ ಓದಿನ ರೂಪವನ್ನು ಚಿಕ್ಕಮಗಳೂರಿನ ನವೀನ್ ಸೊಕ್ಕೆ ಅವರು ಮಾಡಿದ್ದು, ಅದನ್ನೇ ತಕ್ಕುದಾದ ವೀಡಿಯೋದೊಂದಿಗೆ ಬದಲಾವಣೆ ದೈನಿಕದ ಅಕ್ಷರ ಟಿವಿ ಕನ್ನಡದಲ್ಲಿ ವಿವೇಕ ಜಾಗೃತಿ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿದೆ. ವೀಕ್ಷಿಸಿರಿ, ಶೇರ್ ಮಾಡಿ, ಕಮೆಂಟ್ ಮಾಡಿ, ತಪ್ಪದೇ ಸಬ್ಸ್ಕ್ರೈಬ್ ಮಾಡಿರಿ. ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಾಗಿ ತಪ್ಪದೇ ಇದನ್ನು ಶೇರ್ ಮಾಡಿ. ಬೆಂಬಲಿಸಿರಿ. ನಮಸ್ಕಾರ...

Comments